ದೊಡ್ಡವರೆಲ್ಲಾ…

ನಮ್ಮ ಮನೆಯ ಹಿರಿಯರ ಬಗ್ಗೆ ಸ್ವಲ್ಪ ಮಾತಾಡೋನ.
ನಾನು ಯಾಕೆ ಹೀಗೆ ಹಾಳಾಗೋದೆ ಅಂತ ಕೆಲವು insights ಸಿಗುತ್ತೆ. 😀
ಚಿಕ್ಕವನಿದ್ದಾಗಿಂದ ಯಾರನ್ನ ಏನೇ ಕ್ವೊಶ್ನೆ (‘ಶುದ್ಧ’ ಕನ್ನಡದಲ್ಲಿ ಪ್ರಶ್ನೆಗೆ ಕ್ವೊಶ್ನೆ ಅಂತೀವಿ. :D)
ಕೇಳಿದ್ರೂ ಉತ್ತರಗಳ ಬದ್ಲು ಸಿಗ್ತಾ ಇದ್ದಿದ್ದೆಲ್ಲ ದೊಡ್ಡ staresಗಳಷ್ಟೇ.

ಅದೂ ಸಣ್ಣ ಪುಟ್ಟದ್ದಲ್ಲ. ಸೀಧಾ ಅರ್ಧ ಗಂಟೆಯ stareಉ.
ಏನೋ ಕ್ವೊಶ್ನೆ ಕೇಳೋದೇ ಮಹಾಪರಾಧವಾದಂತೆ!!ಉದಾಹರಣೆಗೆ, ನಾನು ಆಚೆ ಹೊರಟಾಗಲೆಲ್ಲ ‘ನೋಡ್ಕೊಂಡು ಹೋಗು, ನೋಡ್ಕೊಂಡು ಹೋಗು’ ಅಂತ ಹೇಳ್ತಾ ಇದ್ರು.
ಸಿಕ್ಕಾಪಟ್ಟೆ confuse ಆಗ್ತಾ ಇತ್ತು. ಒಂದು ದಿನ ಕೇಳೇ ಬಿಟ್ಟೆ, ‘ಯಾರನ್ನಾ’ ಅಂತ?
ಸಿಕ್ತು ದೊಡ್ಡದೊಂದು stareಉ.


ಮತ್ತಿನ್ನೊಮ್ಮೆ ಹೀಗೆ ಯಾರದೋ ಮನೆ ವ್ರತಕ್ಕೆ ಅಂತ ಹೋಗಿದ್ದಾಗ ವಿಪರೀತ ಕೆಮ್ತಾ ಇದ್ದೆ.
ಇನ್ನೊಂದು ‘ಹಿರಿಯರು’ ಅನ್ನಿಸ್ಕೊಂದವ್ರು ಕರಿದ್ಬಿಟ್ಟು ಯಾಕಪ್ಪಾ ಕೆಮ್ತಾ ಇದ್ಯಾ ಅಂತ ಕೇಳಿದ್ರು.
blade ಹಾಕಿಸ್ಕೊಲೋಕ್ಕೆ ಇಷ್ಟ ಇಲ್ದೆ TB ಇದೆ ಸ್ವಾಮಿ ಅಂತ ಹೇಳಿದೆ.
ಅಷ್ತಿಗೆ ಬಿಡ್ಲಿಲ್ಲ ಆಸಾಮಿ .
ಹೌದೇನೋ, ನಿಜಾನೇನೋ ಅಂತ ಪ್ರಶ್ನೆಗಳ ಮೇಲೆ ಪ್ರಶ್ನೆಗಳು.
ಹೋಗ್ಲಿ ಈ ಹೋಮ ಕುಂಡಲದಲ್ಲಿ ಬಿದ್ದು prove ಮಾಡಿದ್ರೆ ತಲೆ ತಿನ್ನೋದು ಬಿಡ್ತೀರಾ ಅಂತ ಕೇಳಿದೆ.
ಮತ್ತೆನಾಯ್ತು ಅಂತ ಕೇಳ್ತೀರಾ?
ಅದೇ ದೊಡ್ಡ stareಉ.


ಹೀಗೆ ಮತ್ತಿನ್ನಿನ್ನೊಮ್ಮೆ (:D) ದೇವರ ಫೋಟೋಗೆ ಹಾಕಿದ್ದ ಹೂವಿನ ಹಾರ ಕೆಳಗೆ ಬಿದ್ದೋಯ್ತು.
ಅಜ್ಜಿ ಬಂದು ನೋಡ್ಬಿಟ್ಟು, ‘ಆಹಾ, ಆ ದೇವ್ರು ನಮಗೆ ವರ ಕೊಟ್ಟಿದ್ದಾನೆ’ ಅಂತ full excite ಆಗ್ಬಿಟ್ರು.
ಅದೇ ಕ್ಷಣ. ಆ ಪುಣ್ಯ ಕ್ಷಣದಿಂದ ನನಗೆ ದೇವರ ಮೇಲೆ ಇದ್ದ ಅಲ್ಪ ಸ್ವಲ್ಪ ನಂಬಿಕೇನೂ ಹೊರಟು ಹೋಯ್ತು.
ಇದೇ ವಿಷಯದಿಂದ ಎಲ್ಲಿ ಯಾರಿಗೆ ಯಾವಾಗ ಸಿಕ್ಕಿದರೂ ನಮ್ಮ ಮನೆ ಹಿರಿಯರಿಂದ ಸಿಗ್ತಾ ಇದ್ವು ದೊಡ್ಡ ದೊಡ್ಡ stares-ಗಳು.


‘ಈ ಬಟ್ಟೆ ಸರಿ ಇಲ್ಲ ಆ ಬಟ್ಟೆ ಸರಿ ಇಲ್ಲ. Software Engineer ತರಾನಾ ಬಟ್ಟೆ ಹಾಕೋತಿಯಾ?’
Mobile ಅಲ್ಲಿರೋ ಈ Shakira wallpaper ತೋರಿಸಿ ಕೇಳಿದೆ ನೋಡಿ ಇವಳು ಬಟ್ಟೇನೇ ಹಾಕಿಲ್ಲ. ಆದರೂ ಚೆನ್ನಾಗಿಲ್ವಾ ಅಂತ.
ಆಮೇಲೆ ಏನಾಯ್ತು ಅಂತ ಹೇಳಲೂ ಬೇಕಾ? 😀


ಹೀಗೆ ನಾನು ಉದ್ದಾರ ಆಗೋ ಎಲ್ಲಾ ಲಕ್ಷಣಗಳನ್ನೂ permanent marker ತಗೊಂಡು ಹಣೆ ಬರಹದ ಮೇಲೆ ಗೀಚ್ಬಿಟ್ಟಿದ್ದಾರೆ.
ಇನ್ನೆಲ್ಲಿ ಉದ್ದಾರ ಆಗೋದು ಉಡುದಾರ ಆಗೋ ಸಾದ್ಯತೇನೂ ಇಲ್ಲ.
ಉನ್ನತನೆಲ್ಲಿದಿಂದ ಆಗೋದು, ಉನ್ಮತ್ತನಾಗ್ಬೇಕು ಅಷ್ಟೇ.


ಹಾಳಾಗಿ ಹೋಗ್ಲಿ ಅಂತ ಮನೆ ಬಿಟ್ಟು ಆಚೆ ಬಂದು ಇದ್ರೆ ಇವನ ಕಾಟ ಜಾಸ್ತಿ ಆಗ್ಬಿಟ್ಟಿದೆ ಇತ್ತೀಚೆಗೆ.
ಎಲ್ಲಾದ್ರೂ ಆಚೆ ಹೋಗಬೇಕಾದ್ರೆ ನನ್ನ ಸ್ಕೂಟಿ ಅಲ್ಲೇ ಹಿಂದೆ ಕೂತು ಬರಬೇಕು ಅಂತ ಹಠ ಹಿಡೀತಾನೆ.
ಹೋಗ್ಲಿ ಪಾಪ ಅಂತ ಕರ್ಕೊಂಡು ಹೋದ್ರೆ, ಹೋಗಬೇಕಾದ ಸ್ಥಳ ಬಂದ್ತಕ್ಷಣ ಶುರು ಹಚ್ಕೋತಾನೆ, ‘ಡಬ್ಬ ತರಾ ಗಾಡಿ ಓಡಿಸ್ತ್ಯ ಅದು ಇದು ಅಂತ’.
ಅಷ್ಟು ಸಾಲದು ಅಂತ ರಸ್ತೆ ಉದ್ದಕ್ಕೂ ಬಡಬಡಿಸ್ತಾ ಬಿದ್ದಿರ್ತಾನೆ.
ಅವನು ಏನೇ ಹೇಳಿದ್ರೂ ಕೆಲಿಸ್ಕೊತೀನಿ ಅಂತ ಅವನ ನಂಬಿಕೆ.
ಅಲ್ಲ pillion rider ಅಂದ ಮಾತ್ರಕ್ಕೆ ಅವನೇನು Winona Ryder ಆ? ಒದ್ರಿದ್ದೆಲ್ಲ ಆಲಿಸೋದಕ್ಕೆ?
ಇರ್ಲಿ, ‘ಎಂತಾ thrilling rideಉ, background music ಒಂದೇ missingಉ’ ಅಂತ ಬೇರೆ sarcastic commentsಗಳು.
ಅಲ್ಲ, ನಾಲಕ್ಕು ಜನ ನಮ್ಮನ್ನಾ ಮಲಗಿಸಿ music ಹಾಕೋ ಸ್ಥಿತಿಗೆ ತರ್ಲಿಲ್ವಲ್ಲಾ ಅಂತ ಖುಷಿ ಪಡೋದ್ಬಿಟ್ಟು ಹೀಗಾ..
ಅಂತೂ ಒಂದು ದೆವ್ವದ ಕಾಟ ತಪ್ಪಿಸ್ಕೊಂಡು ಇನ್ನೊಂದು ದೆವ್ವದ ಬಳಿ ತಗಲಿಹಾಕೊಂಡ್ಹಾಗೆ ಆಯ್ತು.


ಹೋಗ್ಲಿ ಬಿಡಿ.
ಮತ್ತೆ ಹೀಗೆ ಯಾವ್ದಾದ್ರು ಮನೆ ಹಾಳ್ ಐಡೀರಿಯಾ ಹೊಳೆದ ತಕ್ಷಣ ಸಿಗ್ತೀನಿ.

Niranjan Nagaraju

I am Vini – Vini The Pooh aka Niranjan. I am a little “sheep in the big city”. A self-proclaimed atheist, freelance writer and cartoonist; The latter two are an avocation as yet, but I believe they really are my medium. Oh, and I code for a living. :)

3 Comments:

  1. ಚೆನಾಗಿದೆ ಬ್ಲಾಗು.. ಒಂದು ಸರ್ತಿ ಹೋಮದ ಕುಂಡದಲ್ಲಿ ಅಲ್ಲಿ ಬಿದ್ದು ನೋಡಬೇಕಿತ್ತು ಹೆಂಗಿರುತ್ತೆ ಅಂತ 🙂
    ಪಿಲ್ಲಿಯನ್ rider ಬಗ್ಗೆ ಚೆನ್ನಾಗಿ ಬರ್ದಿದಿಯಾ . ನೀನು ಮಾಡೊ ಕೋತಿ ಕೆಲಸದಿಂದ ದೊಡ್ಡವರು ನಿನಗೆ ಇತರ ಪ್ರಶ್ನೆ ಕೇಳ್ತಾರೆ:) ಸ್ವಲ್ಪ ಬುದ್ದಿ ಕಲಿ 🙂

  2. ಆ ನಿಮ್ಮಜ್ಜಿ ನಂಗೆ ಗೊತ್ತು ನಿನ್ ಗಾಡಿ ಅಲ್ಲಿ pillion ಕೂತ್ಕೊಂಡ್ರೆ ಹೇಗಿರುತ್ತೆ ಅಂತ. Consequences ನಿಂಗೆ ಗೊತ್ತಾಯ್ತ ಅನ್ಸುತ್ತೆ last weekend ಘಟನೆಗಳಿಂದ :P. ಇನ್ಮೇಲೆ "ನೋಡ್ಕೊಂಡು" ಹೋಗು 😉

    ಕನ್ನಡ ಬ್ಲಾಗ್ ಅಂತ ಹೇಳಿ shakira, winona ryder wallpaper ಗಳು ಹಕ್ತಿಯ ಥೂ! ಮುಥ್ಹಾಲ ! ಮನೆಹಾಳ! (ಬಯ್ ಗಳು ಕರೆಕ್ಟ್ ಆಗಿ ಬರ್ತಿವೆ ) 😀

  3. certainly witty, nice post.

Leave a Reply

Your email address will not be published. Required fields are marked *