ನಗು ಮುಖದ ಮನುಷ್ಯ

ಸಣ್ಣವನಿದ್ದಾಗ ಅಜ್ಜಿ ಹೀಗೆ ಕಥೆ ಹೇಳ್ತಿದ್ರು.

ಒಂದಾನೊಂದು ಕಾಲದಲ್ಲಿ ‘ನಗು ಮುಖದವನು‘ ಎಂಬ ರಾಜನಿದ್ದನಂತೆ.

ಹೆಸರಿಗೆ ತಕ್ಕಂತೆ ಸದಾ ಮುಖದಲ್ಲಿ ವಿನಾ ಕಾರಣ ಮುಗುಳ್ನಗು ಬೀರುತಿದ್ದನಂತೆ.
(ಆ ಕಾಲದಲ್ಲಿ ಸಮೀಪದಲ್ಲಿ nimhans ಇಲ್ಲದಿದ್ದ ಕಾರಣ ಬಡ್ಡಿ ಮಗ
ಬದುಕ್ಕೊಂಡಿದ್ದ ಅಂತ ನನ್ನ ಅನಿಸಿಕೆ.. ಇರ್ಲಿ. ಕಥೆಗೆ ಬರೋಣ)


ಆದರೆ ಸಿಕ್ಕಾಪಟ್ಟೆ ನಗ್ತಿದ್ದಾನಲ್ಲ ಒಳ್ಳೆ ಮನುಷ್ಯ ಇರ್ಬೇಕು ಅಂತ ನಂಬಿ
ನೆರವು ಕೇಳಿ ಬಂದ ಜನರಿಗೆ ಸಿಗ್ತಾ ಇದ್ದಿದ್ದೆಲ್ಲ ಜೈಲು ವಾಸ, ಹೀಯಾಳಿಕೆಗಳಂತೆ.

ಅದೂ ಕಿಸಿ ಕಿಸೀತಾ ಶಿಕ್ಷೆಗಳನ್ನು ವಿದಿಸುತ್ತಾ ಇದ್ದ ಅನ್ನೋದು important pointಉ.
ಅಂತಹ ಶುದ್ದ ಪಾಪಿ.


ಸರಳವಾಗಿ ಹೇಳ್ಬೇಕಂದ್ರೆ ಆ ಕಾಲದ joker.


ನಾನು ಬೇರೆ ಹೀಗೆ ಯಾವಾಗಲೂ ಕಿಸೀತಾ ಇದ್ದಿದ್ದುರಿಂದ ಮತ್ತು
ಯಾವ ಕೆಲಸ ಹೇಳಿದ್ರೂ ತಲೆ ಆಡಿಸ್ತಿದ್ದ ಕಾರಣ,

ನನಗೂ ನಗು ಮುಖದ ಮನುಷ್ಯನೆಂಬ ಬಿರುದು ಬಂತು.

ನಾನೇನಾದ್ರು high school teacher ಆಗಿದ್ರೆ ಒಳ್ಳೆ famous ಆಗ್ತಾ ಇದ್ದೆ.
NGM ಅನ್ನೋ ಹೆಸರು legend ಆಗಿರ್ಬಹುದಿತ್ತು.

ಈ ಮಹಾ ಪುರುಷರಂತೆ –
T.K.P – ಟೈಮ್ ಪಾಸ್ ಕಡ್ಲೆಕಾಯಿ (classmate ಒಬ್ಬ ಈ ಮಹಶಯನತ್ತ tutionಗೆ ಹೋಗ್ತಿದ್ದ.
tutions ಬುಲ್ ಟೆಂಪೆಲ್ ರೋಡ್ ಅಲ್ಲಿ ಬ್ಯೂಗಲ್ ರಾಕ್ ಪಕ್ಕ  ಇರ್ತಿದ್ವು ಅಂತ ಹೇಳಲೂ ಬೇಕಾ?)

N.S – NS’ ನಾನ್ ಸ್ಟಾಪ್ ನಾನ್ಸೆನ್ಸ್  (ಈತ RMSಗಿಂತಲೂ ಒಂದು ಲೆವೆಲ್ ಮುಂದೆ,
recursive ಹೆಸರೇ ಇಟ್ಕೊಂಡಿದ್ದ)

H.S.D – ಹಳೆ ಸೀಮೆಣ್ಣೆ ಡಬ್ಬ (ವಿಜಯ ಹೈ ಸ್ಕೂಲ್ ಅಲ್ಲಿ ನನಗೆ ಗೊತ್ತಿರೋ
ಒಬ್ರ class ತಗೋತಾ ಇದ್ರು)


ಇವ್ರೆಲ್ರು ಮನೆಯಲ್ಲೂ ಹೀಗೆ ಯಾಕೆ ಹೆಸರಿಟ್ಟರು ಅಂತ ಹೇಳೋದು ಕಷ್ಟ.
Mostly ಇವರುಗಳೂ ಮನೇಲಿ ಹೇಳಿದ ಕೆಲಸ ಮಾಡೋಲ್ಲ ಅಂತ ಹಿಡಿದಿರಬಹುದು.

ಹೋಗ್ಲಿ. ಹಳೆ ಕಥೆ ಈಗ್ಯಾಕೆ?


ಅಜ್ಜಿ ಇಟ್ಟ ಅಡ್ಡ ಹೆಸರಿಂದ ಇನ್ನಷ್ಟು ಪ್ರೋತ್ಸಾಹಿತನಾಗಿ ಇನ್ನಷ್ಟು ಕಿಸಿಯೋಕ್ಕೆ ಶುರು ಹಚ್ಕೊಂಡೆ.
ಇದೇ ನನ್ನ ಜೀವನದ ಕಥೆ.

ಯಾಕೆ ಹೇಳ್ತಾ ಇದ್ದೀನಿ ಅಂದ್ರೆ, ಮುಂದೆ ಯಾರಾದ್ರು ನನ್ನ meet
ಮಾಡಿ ನಾನು ಕಿಸಿಯೋ ಸ್ಟೈಲ್ ನೋಡಿ ಹುಡಗನ screw ಕಲ್ಚ್ಕೊಂಡಿದೆ
ಅಂತ ಅಪಾರ್ತ ಮಾಡ್ಕೊಬಾರದು  ಅಂತ ಒಳ್ಳೆ ಉದ್ದೇಶದಿಂದ.ಇರ್ಲಿ.
ಹೊಸ ವರ್ಷದ ಶುಭಾಶಯಗಳು.
ಶುಭ ಆಶಾ ಇಬ್ರೂ ನೋ ಅಂದ್ರೆ ಬೇರೆ ಹುಡಿಗೀಗೆ ಕಾಳು ಹಾಕಿ,
ಇಲ್ಲ ದೇವದಾಸನಂತೆ ಕುಡಿದು ರಸ್ತೆ ಅಲ್ಲಿ ದಬಾಕೊಳ್ಳಿ.
ಇಲ್ಲ ನೆಗದು ಬಿದ್ದು ನೆಲ್ಲಿಕಾಯಿ ಆಗಿ.
ಹೇಗೋ ಹೊಸ ವರ್ಷಾನ celebrate ಮಾಡಿ.

ಇಡೀ ಬ್ಲಾಗ್ ಅಲ್ಲಿ ಎಲ್ಲೂ  ಕಿಸ್ದಿಲ್ವಲ್ಲಾ ಯಾಕೆ ಅಂತ ಯೋಚಿಸ್ತಾ ಇರೋವ್ರಿಗೆ,
ಇಗೋ ಇಲ್ಲಿ –
ಹಿಹಿಹಿಹಿ! 😀

Niranjan Nagaraju

I am Vini – Vini The Pooh aka Niranjan. I am a little “sheep in the big city”. A self-proclaimed atheist, freelance writer and cartoonist; The latter two are an avocation as yet, but I believe they really are my medium. Oh, and I code for a living. :)

2 Comments:

  1. ಚೆನಗಿದೆ. ಹೊಸಾ ವರುಶದ ಶುಭಾಶಯಗಲು

  2. ಮುಂಚೆನೇ ಬರೀಬೇಕಿತ್ತು. ನಾನ್ ಪ್ರತಿ ಸತಿ ಯಾಕೆ ನಗ್ತಿಯ ಅಂತಂಕೊಂಡಿದೆ. ಇವಾಗಾದ್ರು ವಿಷಯ ಗೊತ್ತಾಯ್ತು, ಸಂತೋಷ. ಹೊಸ ವರ್ಷದ ಶುಭಾಶಯಗಳು.

Leave a Reply

Your email address will not be published. Required fields are marked *