ನಗು ಮುಖದ ಮನುಷ್ಯ

ಸಣ್ಣವನಿದ್ದಾಗ ಅಜ್ಜಿ ಹೀಗೆ ಕಥೆ ಹೇಳ್ತಿದ್ರು. ಒಂದಾನೊಂದು ಕಾಲದಲ್ಲಿ ‘ನಗು ಮುಖದವನು‘ ಎಂಬ ರಾಜನಿದ್ದನಂತೆ. ಹೆಸರಿಗೆ ತಕ್ಕಂತೆ ಸದಾ ಮುಖದಲ್ಲಿ ವಿನಾ ಕಾರಣ ಮುಗುಳ್ನಗು ಬೀರುತಿದ್ದನಂತೆ. (ಆ ಕಾಲದಲ್ಲಿ ಸಮೀಪದಲ್ಲಿ nimhans ಇಲ್ಲದಿದ್ದ ಕಾರಣ ಬಡ್ಡಿ ಮಗ ಬದುಕ್ಕೊಂಡಿದ್ದ ಅಂತ ನನ್ನ ಅನಿಸಿಕೆ.. ಇರ್ಲಿ. ಕಥೆಗೆ ಬರೋಣ)

ದೊಡ್ಡವರೆಲ್ಲಾ…

ನಮ್ಮ ಮನೆಯ ಹಿರಿಯರ ಬಗ್ಗೆ ಸ್ವಲ್ಪ ಮಾತಾಡೋನ. ನಾನು ಯಾಕೆ ಹೀಗೆ ಹಾಳಾಗೋದೆ ಅಂತ ಕೆಲವು insights ಸಿಗುತ್ತೆ. 😀 ಚಿಕ್ಕವನಿದ್ದಾಗಿಂದ ಯಾರನ್ನ ಏನೇ ಕ್ವೊಶ್ನೆ (‘ಶುದ್ಧ’ ಕನ್ನಡದಲ್ಲಿ ಪ್ರಶ್ನೆಗೆ ಕ್ವೊಶ್ನೆ ಅಂತೀವಿ. :D) ಕೇಳಿದ್ರೂ ಉತ್ತರಗಳ ಬದ್ಲು ಸಿಗ್ತಾ ಇದ್ದಿದ್ದೆಲ್ಲ ದೊಡ್ಡ staresಗಳಷ್ಟೇ. ಅದೂ ಸಣ್ಣ ಪುಟ್ಟದ್ದಲ್ಲ. ಸೀಧಾ ಅರ್ಧ ಗಂಟೆಯ stareಉ. ಏನೋ ಕ್ವೊಶ್ನೆ ಕೇಳೋದೇ ಮಹಾಪರಾಧವಾದಂತೆ!!