ಎಲ್ಲಾ ಓಕೆ.. ಈ ಬ್ಲಾಗ್ ಯಾಕೆ?
ಕಾರಣ ಎರಡಿವೆ –
೧. ನಮ್ಮ ಬೆಂಗಳೂರಿನ ಲೋಕಲ್ ಕನ್ನಡದಲ್ಲಿ ಮಾತಾಡಿದ್ರೆ, ಗೀಚಿದ್ರೆ (‘ಶುದ್ದ’ ಕನ್ನಡದಲ್ಲಿ ಬರಿಯೋದು ಅಂತಾರಲ್ಲ ಅದೇ!) ಒಂದ್ ತರಾ ಮಜಾ ಬರುತ್ತೆ.
೨. ಇತ್ತೀಚಿಗೆ ಅಂತೂ ಜನ ನನ್ನ ಆಡ್ಕೊಳೋದು ಜಾಸ್ತಿ ಆಗ್ಬಿಟ್ಟಿದೆ. ನನ್ನ accent ಬಗ್ಗೆ..
ಅಲ್ಲ, ವ್ಯಾಕರಣ ಸರಿ ಆಗಿದ್ರೆ ಸಾಕಲ್ವ?
ಸುಮ್ನೆ ಇಂಗ್ಲಿಷ್-ಅವನ ತರಾ ಮಾತಾಡ್ತಿಯಾ, ರಾಗ ಎಲಿತಿಯಾ, ತಾಳ ಹಾಕ್ತಿಯಾ ಅಂತ ಎಲ್ಲಾ ಬರಿ ಗೋಳಾಟ.
ಅದಕ್ಕೇ ನಂಗೂ ಗೀಚೋಕ್ಕೆ ಬರುತ್ತೆ ಅಂತ ಸ್ವಲ್ಪ ತೋರಿಸ್ಕೊಳೋಣ ಅಂತಾನೆ ಈ ಬ್ಲಾಗು.
ಇವನ್ದಂತೂ ಜಾಸ್ತೀನೆ ಹೀಯಾಳಿಕೆ ಆಯ್ತು.
ಯಾವ್ದೋ ಜಮಾನದಲ್ಲಿ ಹಳೆಗನ್ನಡ ಓದ್ಬಿತ್ತೆ ಅಂತ ತುಂಬಾ ಜಂಭ ಕೊಚ್ಕೋತಾ ಇದ್ದ.
ನನಗಂತೂ ಸಿಕ್ಕಾಪಟ್ಟೆ ಕೋಪ ಬಂದ್ಬಿಡ್ತು ಒಂದ್ ದಿನ.
ಮತ್ತೆ, ಬರಿ ಪಠ್ಯ ಪುಸ್ತಕಗಳನ್ನಷ್ಟೇ ಕುಡುಮ್ದೆ, ಆಂಟಿ ತರಿಸಿದ್ದ ‘ಗೃಹ ಶೋಬ’, ‘ಸುಧಾ’ ಅಂತ ಮಹಾ ಉಪಯುಕ್ತವಾದ 😉 ಮಾಸ ಪತ್ರಿಕೆಗಳನ್ನ ಅತೀತ ಶ್ರದ್ಧೆ ಇಂದ ‘ಓದಿ‘ (ಆಯ್ತು ಆಯ್ತು ತುಂಬಾ ಕಿಸಿ ಬೇಡಿ… ಇರೋ ಎರಡು ಹಲ್ಲೂ ಮುರುದ್ಬಿದ್ದೀತು. :P) ಬೆಲದ ನನಗೆ ಈ ತರಾ ಅವಮನಾನಾ??
ಇರ್ಲಿ.
ಸರಿ ನಿನಗಷ್ಟು ಕನ್ನಡ ಬಂದ್ರೆ ಒಂದು ಒಳ್ಳೆ ಸರ್ವಜ್ಞನ ವಚನ ಹೇಳು ಗುರುವೇ ಅಂತ ಕೇಳ್ದೆ.
ಆಯ್ತು ಅಂತ ಹೋದ ಅಸಾಮಿ ಪತ್ತೆ ನೆ ಇಲ್ಲಾ.
ಪೂರ ಮೂರು ತಾಸುಗಳು ಬಿಟ್ಟು ಮತ್ತೆ ಕಾಣಿಸ್ಕೊಂಡ್ತು ಆದ್ರೂ.
ಕಡೆಗೂ ಒಂದು ವಚನ ಸಿಗ್ತು ಅಂತ ಕಾಣ್ಸುತ್ತೆ, ಸ್ವಲ್ಪ ಕಿವಿ ಕೊಟ್ಟು ಕೇಳೋಣ ಅಂತ ಅಂದ್ಕೊಂಡ್ರೆ..
ಅವನು ಹೇಳ್ತಾನೆ –
“ಮಜ್ಜಿಗೆ ಇಲ್ಲದ ಊಟ ಲಜ್ಜೆಗೆಟ್ಟ ಹೆಣ್ಣಂತೆ ಸರ್ವಜ್ಞ”
ಹೂಂ. ಇದನ್ನ ಒದ್ರೋಕ್ಕೆ ಮೂರು ಗಂಟೆ google search ಬೇರೆ, ಸುಡುಗಾಡು! 😀
ಇಂತಹ ಕಿತ್ತೋಗಿರೋ ಕನ್ನಡದ ಮುಂದೆ ನನ್ನ ಕನ್ನಡ ಎಷ್ಟೋ ಪರವಾಗಿಲ್ಲ. 😀
ಏನಂತೀರಾ?
ಮತ್ತೆ ಸಿಗೋಣ.
ಚೆನಗಿದೆ ಬ್ಲಾಗು 😛 ಒಂದು ವಚನ ಹೇಳೋಕೆ ಇಷ್ಟೊಂದು ಕತೆ ಬರ್ದಿದಿಯ? 😛 ಹೋಗಲಿ ಪಾಪ ಅಂತೆ ಸುಮ್ನೆ ಓದಿದೆ.
ಬಹಳ ಚೆನ್ನಾಗಿದೆ. ತುಂಬಾ ಖುಷಿಯಾಯಿತು. ಹಾಗೆಯೆ ಓದುವ ಅಭ್ಯಾಸ ಬೆಳೆಸಿಕೊಂಡು ನಾನು ಕೊಟ್ಟ ಪುಸ್ತಕ ಓದಿದರೆ ಇನ್ನಷ್ಟು ಖುಷಿಯಾಗುತ್ತದೆ. 🙂
This is goooood man !! I look forward for more of ur blogs 🙂
ನನಗೆ ತುಂಬ ದಿನ ಆದ್ಮೇಲೆ ಕನ್ನಡ ಓದೋ ಅವಕಾಶ ಸಿಕ್ತು…. ಧನ್ಯವಾದ. ಪರವಾಗಿಲ್ಲ ನನ್ನ ಕನ್ನಡ ಕೂಡ ಸಾರಿಗೆ ಇದೆ ಅನಿಸುತ್ತೆ
Maga channagide.. Good 🙂
ವಚನ ಕಲ್ಲು ಹೊಡೆಯುವ ತರಹ ಇದೆ ಕೊಲೆತಿರೋ ಮೊಟ್ಟೆ ಸಾಲದು ಆದರು ಅಯ್ಯೋ ಪಾಪ ಅಂತ ಓದ್ದೆ