Posts tagged ಹಾಸ್ಯ

ನಗು ಮುಖದ ಮನುಷ್ಯ

2

ಸಣ್ಣವನಿದ್ದಾಗ ಅಜ್ಜಿ ಹೀಗೆ ಕಥೆ ಹೇಳ್ತಿದ್ರು.

ಒಂದಾನೊಂದು ಕಾಲದಲ್ಲಿ ‘ನಗು ಮುಖದವನು‘ ಎಂಬ ರಾಜನಿದ್ದನಂತೆ.

ಹೆಸರಿಗೆ ತಕ್ಕಂತೆ ಸದಾ ಮುಖದಲ್ಲಿ ವಿನಾ ಕಾರಣ ಮುಗುಳ್ನಗು ಬೀರುತಿದ್ದನಂತೆ.
(ಆ ಕಾಲದಲ್ಲಿ ಸಮೀಪದಲ್ಲಿ nimhans ಇಲ್ಲದಿದ್ದ ಕಾರಣ ಬಡ್ಡಿ ಮಗ
ಬದುಕ್ಕೊಂಡಿದ್ದ ಅಂತ ನನ್ನ ಅನಿಸಿಕೆ.. ಇರ್ಲಿ. ಕಥೆಗೆ ಬರೋಣ)

ದೊಡ್ಡವರೆಲ್ಲಾ…

3

ನಮ್ಮ ಮನೆಯ ಹಿರಿಯರ ಬಗ್ಗೆ ಸ್ವಲ್ಪ ಮಾತಾಡೋನ.
ನಾನು ಯಾಕೆ ಹೀಗೆ ಹಾಳಾಗೋದೆ ಅಂತ ಕೆಲವು insights ಸಿಗುತ್ತೆ. 😀
ಚಿಕ್ಕವನಿದ್ದಾಗಿಂದ ಯಾರನ್ನ ಏನೇ ಕ್ವೊಶ್ನೆ (‘ಶುದ್ಧ’ ಕನ್ನಡದಲ್ಲಿ ಪ್ರಶ್ನೆಗೆ ಕ್ವೊಶ್ನೆ ಅಂತೀವಿ. :D)
ಕೇಳಿದ್ರೂ ಉತ್ತರಗಳ ಬದ್ಲು ಸಿಗ್ತಾ ಇದ್ದಿದ್ದೆಲ್ಲ ದೊಡ್ಡ staresಗಳಷ್ಟೇ.

ಅದೂ ಸಣ್ಣ ಪುಟ್ಟದ್ದಲ್ಲ. ಸೀಧಾ ಅರ್ಧ ಗಂಟೆಯ stareಉ.
ಏನೋ ಕ್ವೊಶ್ನೆ ಕೇಳೋದೇ ಮಹಾಪರಾಧವಾದಂತೆ!!

(more…)

ಎಲ್ಲಾ ಓಕೆ.. ಈ ಬ್ಲಾಗ್ ಯಾಕೆ?

6

ಕಾರಣ ಎರಡಿವೆ –
೧. ನಮ್ಮ ಬೆಂಗಳೂರಿನ ಲೋಕಲ್ ಕನ್ನಡದಲ್ಲಿ ಮಾತಾಡಿದ್ರೆ, ಗೀಚಿದ್ರೆ (‘ಶುದ್ದ’ ಕನ್ನಡದಲ್ಲಿ ಬರಿಯೋದು ಅಂತಾರಲ್ಲ ಅದೇ!) ಒಂದ್ ತರಾ ಮಜಾ ಬರುತ್ತೆ.
೨. ಇತ್ತೀಚಿಗೆ ಅಂತೂ ಜನ ನನ್ನ ಆಡ್ಕೊಳೋದು ಜಾಸ್ತಿ ಆಗ್ಬಿಟ್ಟಿದೆ. ನನ್ನ accent ಬಗ್ಗೆ..


(more…)

Go to Top